ಗುಲಾಂನಬಿಗೆ ಕರುಣಾಕರ ರೆಡ್ಡಿ ತಿರುಗೇಟು
ಸರಕಾರ ಉರುಳಿಸುವ ತಾಕತ್ತು ಕಾಂಗ್ರೆಸ್‌ಗಿಲ್ಲ
ದಾವಣಗೆರೆ: ಜನಮನ್ನಣೆ ಪಡೆದ ಸರಕಾರ ಉರುಳಿಸುವ ತಾಕತ್ತು ಕಾಂಗ್ರೆಸ್‌ಗಿಲ್ಲ ಎಂದು ರಾಜ್ಯ ಕಂದಾಯ ಸಚಿವ ಕರುಣಾಕರ ರೆಡ್ಡಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್ ಮುಖಂಡ ನಾಗರಾಜ್ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕದಿಂದ ಅತಿ ಹೆಚ್ಚು ಸಂಸದರನ್ನು ಲೋಕಸಭೆಗೆ ಕಳುಹಿಸಿದರೆ ವರ್ಷದೊಳಗೆ ಬಿಜೆಪಿ ಸರಕಾರ ಪತನ ಮಾಡುವ ಗುಲಾಂ ನಬಿ ಹೇಳಿಕೆ ಹುಚ್ಚುತನದಿಂದ ಕೂಡಿದೆ. ಈ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೆಂಬುದು ಸಾಬೀತಾಗಿದೆ ಎಂದು ಲೇವಡಿ ಮಾಡಿದರು.
ಜನಮತ ಪಡೆದ ಸರಕಾರದ ಪತನಕ್ಕೆ ಪ್ರಯತ್ನಿಸುವುದು ಸುಲಭವಲ್ಲ. ಹಾಗೆ ಮಾಡಲು ಬಿಜೆಪಿ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದೆ ಎಂಬ ನೈತಿಕತೆಯಿಂ ದ ಕಾಂಗ್ರೆಸ್ ಹೆಚ್ಚು ಸಂಖ್ಯೆಯ ಸಂಸದರನ್ನು ಗೆಲ್ಲಿಸಿ ಕೊಡುವಂತೆ ಕೇಳುತ್ತಿದೆ ಎಂದು ಪ್ರಶ್ನಿಸಿದ ರೆಡ್ಡಿ, ರೈಲ್ವೆಯಲ್ಲಿ ರಾಜ್ಯಕ್ಕಾದ ಅನ್ಯಾಯ ಅಷ್ಟಿಷ್ಟಲ್ಲ. ಬಿಹಾರ, ತಮಿಳುನಾಡಿಗೆ ಆದ್ಯತೆ ನೀಡಿ ನಮ್ಮನ್ನು ಕಡೆಗಣಿಸಲಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಕಿತ್ತೊಗೆಯಿರಿ ಎಂದು ಹೇಳುವ ಸಿದ್ದರಾಮಯ್ಯ ಇದನ್ನೇನು ಗೊಂಬೆ ಆಟ ಎಂದು ತಿಳಿದಿದ್ದಾರೆಯೇ ಎಂದು ವ್ಯಂಗ್ಯವಾಡಿದರು.
ಬಸವಣ್ಣನ ಬಗ್ಗೆ ಏನೂ ತಿಳಿಯದ ಸೋನಿಯಾ ಗಾಂ ಕಾಂಗ್ರೆಸ್ ಸಮಾವೇಶದಲ್ಲಿ ಬಸವಣ್ಣನ ಬಗ್ಗೆ ಮಾತನಾಡಿದ್ದಾರೆ. ಯಾರೋ ಬರೆದುಕೊಟ್ಟ ಭಾಷಣ ಓದಿರಬೇಕು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಟೀಕಿಸಿದರು.
ದೇಶಕ್ಕೆ ಬಲಿದಾನ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರೇ ಭಾರತ ವಿಭಜನೆಗೆ ಹಾಗೂ ಕಾಶ್ಮೀರ ಸಮಸ್ಯೆಗೆ ಕಾರಣ ಎಂದರು.
ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ, ಕಾಂಗ್ರೆಸ್ ವಂಶಪಾರಂಪರಿಕ ಆಡಳಿತ ನಡೆಸುತ್ತ ಬಂದಿದೆ. ಯೋಜನೆಗಳಿಗೆ ಕೂಡ ಕುಟುಂಬ ಸದಸ್ಯರ ಹೆಸರಿಟ್ಟಿದೆ. ಜವಾಹರ್ ರೋಜಗಾರ್, ಇಂದಿರಾ ಆವಾಸ್, ರಾಜೀವ್ ಗಾಂ ಸಬ್‌ಮಿಷನ್ ಯೋಜನೆಗಳೆಲ್ಲ ಇದಕ್ಕೆ ಸ್ಪಷ್ಟ ಸಾಕ್ಷಿ ಎಂದು ಹೇಳಿದರು.
ರಾಜ್ಯ ಕೃಷಿ ಸಚಿವ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಶಾಸಕರಾದ ಬಿ.ಪಿ.ಹರೀಶ್,ಎಂ.ಪಿ.ರೇಣುಕಾಚಾರ್ಯ, ಬಸವರಾಜ್ ನಾಯ್ಕ್ ಹಾಗೂ ಎಚ್.ಎಸ್.ನಾಗರಾಜ್, ಯಶವಂತ ರಾವ್, ಉಮಾ ಪ್ರಕಾಶ್, ಬಿ.ಲೋಕೇಶ್, ಶಿವಕುಮಾರ್ ಇತರರು ಹಾಜರಿದ್ದರು.
ಅಸಭ್ಯ ವರ್ತನೆ : ಪ್ರಾಚಾರ್ಯ ಅಮಾನತು
ಚಿತ್ರದುರ್ಗ : ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ವಿಶೇಷ ಜಾಗೃತ ದಳದ ಸದಸ್ಯರ ಜತೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಪಾದನೆ ಮೇರೆಗೆ ಹಿರಿಯೂರಿನ ಗಿರೀಶ ಬಾಲಕಿಯರ ಪಿಯು ಕಾಲೇಜಿನ ಪ್ರಾಚಾರ್ಯರನ್ನು ಅಮಾನತುಗೊಳಿಸಲಾಗಿದೆ.
ಶನಿವಾರ ರಾಜ್ಯಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ನಕಲು ತಡೆಯುವ ಸಲುವಾಗಿ ಮಹಿಳಾ ಮೇಲ್ವಿಚಾರಕರನ್ನು ನೇಮಿಸಿಕೊಳ್ಳುವಂತೆ ಪ್ರಾಚಾರ್ಯರಿಗೆ ಸೂಚಿಸಲಾಯಿತು.ಆಗ ವಿನಾಕಾರಣ ಸಿಟ್ಟಿಗೆದ್ದ ಅವರು ಜಾಗೃತ ದಳದವರ ಜತೆ ಅಸಭ್ಯವಾಗಿ ವರ್ತಿಸಿದರು ಎನ್ನಲಾಗಿದೆ.
ಈ ಬಗ್ಗೆ ಜಾಗೃತ ದಳದ ಸದಸ್ಯರು ನೀಡಿದ ದೂರಿನನ್ವಯ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ ಎಂದು ಉಪನಿರ್ದೇಶಕ ರವೀಂದ್ರ ಕೊಣ್ಣೂರು ತಿಳಿಸಿದ್ದಾರೆ.
ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ವಿಜೇತರು
ಚಿತ್ರದುರ್ಗ: ನಗರದಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಂಗಳೂರು ಆರ್‍ಮಿ ಸ್ಪೋರ್ಟ್ಸ್ ಸೆಂಟರ್‌ನ ದಿನೇಶ್ ಕುಮಾರ್ ‘ಮಿಸ್ಟರ್ ಕರ್ನಾಟಕ-೨೦೦೯’, ಪ್ರತಾಪ್ ಚಂದ್ರನ್ ‘ಬೆಸ್ಟ್ ಪೋಜರ್ ’ಆಗಿ ಹೊರ ಹೊಮ್ಮಿದ್ದಾರೆ.
ಇತರೆ ವಿಭಾಗಗಳಲ್ಲಿ ಬಹುಮಾನ ಪಡೆದವರ ವಿವರ ಇಂತಿದೆ.
೫೫ ಕೆ.ಜಿ.ವಿಭಾಗ-ಬೆಳಗಾವಿಯ ಪ್ರಮೋದ್ ಪೂಣಾಚೆ (ಪ್ರಥಮ), ಬೆಂಗಳೂರಿನ ಬಿ.ಪಳನ (ದ್ವಿತೀಯ), ದಾವಣಗೆರೆಯ ರಫೀಕ್ (ತೃತೀಯ).
೬೦ ಕೆ.ಜಿ.ವಿಭಾಗ-ಧಾರವಾಡದ ಸಿದ್ಧು ಜಲಗಾರ್ (ಪ್ರಥಮ), ಚಿತ್ರದುರ್ಗ ಅಣ್ಣಪ್ಪ (ದ್ವಿತೀಯ), ಬೆಂಗಳೂರಿನ ನಾರಾಯಣಸ್ವಾಮಿ (ತೃತೀಯ).
೬೫ ಕೆ.ಜಿ.ವಿಭಾಗ-ಬೆಂಗಳೂರಿನ ದಿನೇಶ್ ಕುಮಾರ್ (ಪ್ರಥಮ), ಧಾರವಾಡದ ಬಿ.ಶರತ್ ತಾಪಾ (ದ್ವಿತೀಯ), ದಾವಣಗೆರೆಯ ಈರಣ್ಣ (ತೃತೀಯ).
೭೦ ಕೆ.ಜಿ.ವಿಭಾಗ-ಬೆಂಗಳೂರಿನ ಸೇಲವನ್ (ಪ್ರಥಮ), ಬೆಳಗಾಂನ ಅಮರ ಪಾಟೀಲ (ದ್ವಿತೀಯ), ಎಚ್.ರಾಜಕುಮಾರ್ (ಬೆಳಗಾವಿ).
೭೫ ಕೆ.ಜಿ.ವಿಭಾಗ-ಬೆಂಗಳೂರಿನ ಪ್ರತಾಪ್ ಚಂದ್ರನ್ (ಪ್ರಥಮ), ಬೆಳಗಾಂನ ಅಮಿತ್ (ದ್ವಿತೀಯ), ಬೆಂಗಳೂರಿನ ಜಗನ್ (ತೃತೀಯ).
೮೦ ಕೆ.ಜಿ.ವಿಭಾಗ-ಬೆಂಗಳೂರಿನ ಅಲೆಕ್ಸ್ ಕುರಿಯನ್ (ಪ್ರಥಮ), ಬೆಂಗಳೂರಿನ ಪ್ರಕಾಶ್ (ದ್ವಿತೀಯ), ಬೆಳಗಾವಿಯ ಸಂದೀಪ್ ಪಾಟೀಲ್(ತೃತೀಯ).
ಪ್ಲಸ್ ೮೫ ಕೆ.ಜಿ.ವಿಭಾಗ-ಬೆಳಗಾವಿಯ ಪ್ರೀತಮ್ ಚೌಗಲೆ (ಪ್ರಥಮ), ಮಂಗಳೂರಿನ ನವೀನ್ ಪೂಜಾರಿ (ದ್ವಿತೀಯ), ಬೆಳಗಾವಿ ಸಚಿನ್ (ತೃತೀಯ).
೪೦ ವರ್ಷ - ೭೦ ಕೆ.ಜಿ.ವಿಭಾಗ-ಗದಗ್‌ನ ವಾಸುದೇವ್ (ಪ್ರಥಮ), ಧಾರವಾಡ ಅರವಿಂದ್ (ದ್ವಿತೀಯ).
೭೫ ಕೆ.ಜಿ.ವಿಭಾಗ-ಬೆಂಗಳೂರು ವಿಠಲ್‌ದಾಸ್ ನಾಯ್ಕ (ಪ್ರಥಮ), ಶಿವಮೊಗ್ಗ ಪರಮೇಶ್ (ದ್ವಿತೀಯ), ಗಿಲ್ ಬರ್ಟ್ ಡೈಯಾಸ್ (ತೃತೀಯ).
೫೦ ವರ್ಷ - ೮೦ ಕೆ.ಜಿ.ವಿಭಾಗ-ಮಂಗಳೂರು ರವಿಕುಮಾರ್ (ಪ್ರಥಮ), ಶಿವಮೊಗ್ಗ ಪಾಂಡುರಂಗ (ದ್ವಿತೀಯ), ಶಿವಮೊಗ್ಗ ನಂಜುಂಡೇಗೌಡ (ತೃತೀಯ).
ವಿಕಲಚೇತನರ ೮೦ ಕೆ.ಜಿ.ವಿಭಾಗ-ಬೆಂಗಳೂರಿನ ಸೈಯದ್ ಇಬಾದತ್ (ಪ್ರಥಮ), ಬಂಗಾರಪ್ಪ (ದ್ವಿತೀಯ), ವೆಂಕಟೇಶ್ (ತೃತೀಯ).
Subscribe to:
Post Comments (Atom)
0 comments:
Post a Comment